Tuesday, July 10, 2007


ಒಂದು ಪುಟ್ಟ


ನೀನು ಸೋತರೆ-ನಿನ್ನೊಡನೆ ನಿಲ್ಲುವುದಿಲ್ಲ ಆ ನೆರಳು
ಉಸಿರು ನಿಂತರೆ ನಿನ್ನೊಡನೆ ಬರದು-ಏನೂ...

ಅದಕ್ಕೇ ಅನುಭವಿಸಿ ಬಿಡು ಬದುಕನ್ನು.
ದೇವರು ನೀಡಿದ ಈ ಚಿಕ್ಕ ವರವನ್ನು...
ಏಕಾಂಗಿತನದಲ್ಲಿ ನೊಂದುಕೊಳ್ಳುತ್ತಿ
-ನಿನ್ನನ್ನು ನೀನು ಪ್ರೀತಿಸಲು ಕಲಿಯುವವರೆಗೆ.

ಸೋಲನ್ನು ಕಂಡು ಹೆದರುತ್ತಿ
-ಪ್ರಯತ್ನದ ಬಗ್ಗೆ ತಿಳಿಯದೆ ಇರುವವರೆಗೆ.

ಗೆಲುವೆಂದರೆ ಕೂಡ ಹೆದರಿಕೆಯೇ.
-ಅದು ನೀಡುವ ಆಹ್ಲಾದತೆಯನ್ನು ಊಹಿಸಲಾರದವರೆಗೂ.

ಜನರೆಂದರೆ ಕೂಡಾ ಹಿಂಜರಿಕೆಯೇ
-ಕಾಗೆಗಳಿಗಿಂತ ಶ್ರೇಷ್ಠರಾಗಿರುತ್ತಾರೆಂದುಕೊಂಡಿರುವವರೆಗೂ.

ನಿನ್ನನ್ನು ಯಾರಾದರೂ ತಿರಸ್ಕರಿಸುತ್ತಾರೆಂದುಕೊಂಡರೆ
-ಅದು ನಿನ್ನ ಮೇಲೆ ನಿನಗೆ ನಂಬಿಕೆಯಿಲ್ಲದೆ.

ಗಾಯಗಳೆಂದರೆ ನಿನಗೆ ವಿಪರೀತ ನೋವೆಂದುಕೊಂಡರೆ
-ಅವು ಇಲ್ಲದಿರುವಾಗಿನ ಸುಖ ನಿನಗೆ ತಿಳಿಯದೆ.

ಸತ್ಯವನ್ನು ಕಂಡು ನೀನು ನಡುಗಿದೆಯೆಂದರೆ
-ಸುಳ್ಳು ಎಷ್ಟು ನಿಕೃಷ್ಟವೆಂದು ಅರ್ಥವಾಗದೆ.

ಪ್ರೀತಿಸಲು ಸಂಶಯಪಡುತ್ತಿದ್ದೀಯೆಂದರೆ
-ಹೃದಯದಾಳದಿಂದ ಅದು ಸ್ವಚ್ಛವಾಗಿ ಬರದೆ.

ಬದುಕನ್ನು ಆಲಸ್ಯದಿಂದ ಉಸಿರಾಡುತ್ತಿ
-ಸೌಂದರ್ಯವನ್ನು ಆಸ್ವಾದಿಸಲು ಕೈಲಾಗದೆ.

ಗೇಲಿಗೊಳಗಾದರೆ ಎಲ್ಲಿಗೋ ಓಡಿಬಿಡುತ್ತಿ
-ನಿನ್ನಲೇ ನೀನು ನಗಲು ಬಾರದೆ.

ನಾಳಿನ ಭವಿಷ್ಯಕ್ಕೆ ಹೆದರುತ್ತಿ
-ಜ್ನಾನದ ಪೈರಿಗೆ ಅದು ಗೊಬ್ಬರವೆಂದು ತಿಳಿಯದೆ.

ನಿನ್ನೆಯ ಗತವನ್ನು ನೆನೆದು ಚಿಂತಿಸುತ್ತಿ
-ಶಕ್ತಿ ನೀಡುವ ಗೊಬ್ಬರ, ಒಂದು ಕಾಲದ ನಿಕೃಷ್ಟವೆನ್ನುವ ಜ್ಞಾನವಿಲ್ಲದೆ.

ಕತ್ತಲನ್ನು ಕಂಡು ಕಣ್ಮುಚ್ಚಿಕೊಳ್ಳಬೇಡ
-ನಕ್ಷತ್ರಗಳು ಕಾಣುವ ಸಮಯ ಅದು.

ಬೆಳಕನ್ನು ಕಂಡು ಹಿಂತಿರುಗಬೇಡ
-ಸತ್ಯ ಸ್ನೇಹ ಹಸ್ತವನ್ನು ಚಾಚುವ ಸಮಯ ಅದು.

ಗುರಿಯೆಡೆಗೆ ಹೆಜ್ಜೆ ಹಾಕುತ್ತಾ
-ದೂರವನ್ನು ಕಂಡು ಹೆದರಿದರೆ ಹೇಗೆ?

ಪುಟ್ಟ ಹುಳುವಾಗಿ ಹುಟ್ಟಿದರೇನು
-ಅದರ ಗುರಿ ಚಿಟ್ಟೆಯಾಗುವುದು ತಾನೆ!